ವರುಣ 1

	ಪಶ್ಚಿಮದಿಕ್ಕಿನ ಅಧಿಪತಿ, ಜಲಾಧಿದೇವತೆ. ತಂದೆ ಕಶ್ಯಪ, ತಾಯಿ ಅದಿತಿ. ಪ್ರಚೇತಾ, ಪಾಶೀ, ಯಾದಸಾಂಪತಿ, ರಪ್ಪತಿಃ, ಶ್ವಸನಃ ಜಲೇಶ್ವರ, ಜೀವನಾವಾಸ-ಇವು ನಾಮಾಂತರಗಳು. ಈತನಿಗೆ ವಾರುಣಿ, ಋದ್ಧಿ ಎಂಬ ಇಬ್ಬರು ಪತ್ನಿಯರು. ಶುಕ್ರಾಚಾರ್ಯನ ಮಗಳಾದ ಜ್ಯೇಷ್ಠಾದೇವಿಯನ್ನು ಈತ ಮದುವೆಯಾಗಿದ್ದ. ಈಕೆಗೆ ಅಧರ್ಮ, ಬಲ ಎಂಬ ಇಬ್ಬರು ಗಂಡು ಮಕ್ಕಳು, ಮದ್ಯಾಭಿಮಾನಿ ದೇವತೆಯಾದ ಸುರೆ ಮಗಳು.

	ವರುಣಮಂತ್ರ ಜಪಿಸಿದರೆ ಅನಾವೃಷ್ಟಿ ಹೋಗಿ ಮಹಾವೃಷ್ಟಿಯಾಗು ತ್ತದೆ ಎಂದು ನಂಬಿಕೆ. ವರುಣ ಎಂಬ ಹೆಸರಿನ ಒಂದು ವೃಕ್ಷವೂ ಇದೆ. ಕಟುತ್ವ, ಉಷ್ಣತ್ವ, ರಕ್ತದೋಷ, ಶೀತವಾತ, ದೀಪನತ್ವ, ವಿದ್ರುಧಿ ಮುಂತಾದವನ್ನು ನಿವಾರಿಸುವ ಗುಣ ಈ ವೃಕ್ಷಕ್ಕಿದೆ.
													*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ